ವೀರ ನರೇಂದ್ರ ವಿವೇಕಾನಂದ
Category: ಶ್ರೀಸ್ವಾಮಿ ವಿವೇಕಾನಂದ
Author: ಸ್ವಾಮಿ ನಿತ್ಯಸ್ಥಾನಂದ
ವೀರ ನರೇಂದ್ರ ವಿವೇಕಾನಂದ
ಇಳೆಗಿಳಿದು ತಾ ಬಂದ || ನಮ್ಮ ||
ಜ್ಞಾನಮಸ್ತಕ ತ್ಯಾಗವೇ ಉಸಿರು
ದಿವ್ಯಜ್ಯೋತಿಯೇ ನಯನಾಂಬುಜವು
ಪ್ರಣವರಚಿತ ವಾಗ್ಯಂತ್ರವಾತನದು ||
ದಯೆಯೇ ಹೃದಯ ನಿರ್ಭಯ ರುಧಿರ
ಶ್ರದ್ಧಾ ಶಕ್ತಿ ನರನಾಡಿಗಳು |
ಮುಕ್ತಿಯೇ ಆತನ ಮೂಲಮಂತ್ರವು ||
ವೀರ್ಯೋತ್ಸಾಹವೇ ಅಸ್ಥಿ ಸ್ನಾಯುಗಳು
ಕ್ರಿಯೋತ್ತೇಜವೇ ಕೈಕಾಲುಗಳು
ದಿವ್ಯಗುಣಾಕಾರ ಮೂರ್ತರೂಪ ||