ಶಾರದಾ ಮಹಾಮಾತೆ ದಿವ್ಯಜ್ಞಾನ ವರಪ್ರದಾತೆ

Category: ಶ್ರೀಶಾರದಾದೇವಿ

Author: ಸ್ವಾಮಿ ನಿತ್ಯಸ್ಥಾನಂದ

ಶಾರದಾ ಮಹಾಮಾತೆ
ದಿವ್ಯಜ್ಞಾನ ವರಪ್ರದಾತೆ |
ವಿಶ್ವಪ್ರೇಮ ಮೂರ್ತರೂಪ
ವಿಗತ ಸರ್ವ ಸ್ವಾರ್ಥತೆ ||

ಪರಮಹಂಸ ತಪೋಘನದ
ನಿತ್ಯಕೃಪಾ ವರ್ಷಿಣೀ |
ಭಕ್ತಹೃದಯ ಕ್ಷೇತ್ರವನ್ನು
ಪರಮಸಫಲ ಕಾರಿಣಿ ||

ಧರೆಗೆ ಇಳಿದ ವಿಶ್ವಶಕ್ತಿ
ಸರಳರೂಪ ಧಾರಿಣಿ |
ಪರಮ ಪದವ ತೊರೆದು ಬಂದೆ
ಜಗದ ಹಿತಾಕಾಂಕ್ಷಿಣಿ ||