ಸ್ವಾಮಿ ವಿವೇಕರ ವಿಶ್ವ ಸಂದೇಶವು

Category: ಶ್ರೀಸ್ವಾಮಿ ವಿವೇಕಾನಂದ

Author: ಸ್ವಾಮಿ ನಿತ್ಯಸ್ಥಾನಂದ

ಸ್ವಾಮಿ ವಿವೇಕರ ವಿಶ್ವಸಂದೇಶವು
ಸಂಘರೂಪದಲಿ ಮೂಡಿಹುದು |
ಸಂಘದ ಗುಡಿಯೊಳು ರಾಮಕೃಷ್ಣ ಗುರು
ಮೂರ್ತಿಯಂದದಲಿ ಶೋಭಿಪರು ||

ಭಾರತ ದೇಶದ ದಿವ್ಯ ಪರಂಪರೆ
ತಳಹದಿಯದರ ಆಗಿಹುದು |
ಮಾನವಸೇವೆಯೆ ಭಿತ್ತಿಕಂಬಗಳು
ಆತ್ಮಮುಕ್ತಿಯೆ ಗೋಪುರವು ||

ತ್ಯಾಗವೇ ಅದರ ಮಹಾದ್ವಾರವು
ಸಾಧನ ಜೀವನ ಪ್ರಾಂಗಣವು |
ಸಕಲ ಕ್ರಿಯೆಗಳೇ ಪೂಜಾ ಪರಿಕರ
ಆತ್ಮಸಮರ್ಪಣವಾರತಿಯು ||