ರಾಮಕೃಷ್ಣ ಕೃಪಾಸಿಂಧು ಸಲಹು

Category: ಶ್ರೀರಾಮಕೃಷ್ಣ

Author: ಸ್ವಾಮಿ ನಿತ್ಯಸ್ಥಾನಂದ

ರಾಮಕೃಷ್ಣ ಕೃಪಾಸಿಂಧು
ಸಲಹು ಹೃದಯದಲ್ಲಿ ನಿಂದು |
ಪರಮ ಬಂಧು ನೀಡು ಇಂದು
ನಿನ್ನ ಪ್ರೇಮದಮೃತ ಬಿಂದು ||

ಸಕಲ ಶಾಸ್ತ್ರ ಸತ್ಯ ಸಾಕ್ಷಿ
ನಿನ್ನ ದಿವ್ಯ ಜೀವನ |
ಸಂತರೆಲ್ಲರನುಭವಗಳ
ನೀನೇ ಪರಮ ಸಂಗಮ ||

ಜಗದ ಪ್ರೀತಿಯೆಲ್ಲ ಕೂಡಿ
ಭಕ್ತಿಯಾಯ್ತು ನಿನ್ನಲಿ |
ದೇವಭಕ್ತಿ ಲೋಕ ಪ್ರೀತಿ
ಒಂದೇ ನಿನ್ನ ಮನದಲಿ ||