ಸೃಷ್ಟಿಯೊಳಧಿಕನು ಮಾನವನು
Category: ಶ್ರೀಸ್ವಾಮಿ ವಿವೇಕಾನಂದ
Author: ಸ್ವಾಮಿ ನಿತ್ಯಸ್ಥಾನಂದ
ಸೃಷ್ಟಿಯೊಳಧಿಕನು ಮಾನವನು
ದೇವಾಸುರಗಂಧರ್ವರಿಗಿಂತಲೂ
ಮಾನವ ಜನ್ಮ ಮಿಗಿಲು ||
ದಿವ್ಯತೆ ಅವನೊಳಗಡಗಿಹುದು
ಅದುವೆ ಅವನ ನಿಜತಿರುಳು |
ಪಾಪಿಯು ಅವನೆಂಬುದೆ ಪಾಪವು
ಅಮೃತಾನಂದದ ಪಾಲವನು ||
ದಿವ್ಯತೆ ಹೊರಸೂಸುವುದೇ ಗುರಿಯು
ಮುಕುತಿಯ ಧಾಮದ ದ್ವಾರವದು |
ಜ್ಞಾನಕರ್ಮಗಳು ಭಕ್ತಿಯೋಗಗಳು
ಗುರಿಸಾಧನೆಗಿವು ದಿಟಮಾರ್ಗಗಳು ||
ಗ್ರಂಥ ಹೋಮ ಪೂಜಾದಿಗಳೆಲ್ಲವು
ತಿಳಿಯಿರಿ ಗೌಣದ ವಿಷಯಗಳು |
ಜೀವಸೇವೆಯೇ ಪರಶಿವ ಸೇವೆ
ಭವಸಾಗರವನೆ ದಾಟುವ ನಾವೆ ||