ಹೇ ರಾಮ ಮತ್ತೆನಗೆ ದಿಕ್ಕಾರು

Category: ಶ್ರೀರಾಮ

Author: ಸ್ವಾಮಿ ಹರ್ಷಾನಂದ

ಹೇ ರಾಮ ಮತ್ತೆನಗೆ ದಿಕ್ಕಾರು ಅಯ್ಯಾ
ಬೇರಾರು ದಿಕ್ಕಿಲ್ಲ ನೀನಲ್ಲದಯ್ಯಾ ||

ಅಡಿಗಡಿಗೆ ನಿನ್ನನ್ನೆ ನೆನೆಯುತಿಹೆನಯ್ಯಾ
ತಡಮಾಡದೆನ್ನನ್ನು ಕಾಯಬೇಕಯ್ಯಾ ||

ನಾನೆಷ್ಟು ಜಾರಿದರು ಈ ಧರಣಿಯೊಳಗೆ
ನೀನಲ್ಲದಿನ್ನಾರು ಅವಲಂಬವೆನಗೆ ||

ನಿನ್ನನ್ನೆ ನಂಬಿದೆನು ಮನದಾಳದಲ್ಲಿ
ನಿನ್ನ ಷಡ್ಗುಣವನ್ನೆ ಪೊಗಳುತ್ತ ಇಲ್ಲಿ||

ದಯೆಯ ಸಾಗರ ನೀನು ದಯನೀಯ ನಾನು
ನ್ಯಾಯವೇ ನನ್ನನ್ನು ಕಾಪಾಡದಿಹುದು ||