ನಂಬಿ ಕರೆದರೆ ತಾಯಿ

Category: ಶ್ರೀದೇವಿ

Author: ವಚನವೇದ

ನಂಬಿ ಕರೆದರೆ ತಾಯಿ ಓ ಎನ್ನದಿಹಳೇನೋ |
ನಿನ್ನ ತೊರೆದವಳೆಂತು ಇರಬಲ್ಲಳೋ ||

ಬಿಲ್ವದಳ ಹೂವುಗಳ ತಂದು ಪಾದಕೆ ಮುಡಿಸೋ |
ನಿನ್ನ ಭಕ್ತಿಯ ದಿವ್ಯ ಗಂಧದೊಡನೆ ||