ತಾಯ ಮಾಯದ ಬಲೆಯು
Category: ಶ್ರೀದೇವಿ
Author: ವಚನವೇದ
ತಾಯ ಮಾಯದ ಬಲೆಯು ಹರಹಿದೆ
ಮೂರು ಲೋಕದ ಅಗಲಕೆ ||
ಬ್ರಹ್ಮವಿಷ್ಣುಗಳೆಲ್ಲ ಮೂರ್ಛಿತ-
ರಾಗಿ ಸಂದರು ಮಾಯೆಗೆ |
ಇನ್ನು ಮನುಜರ ಪಾಡು ಏನಿದೆ
ನಮಗೆ ಎಲ್ಲಿದೆ ಬಿಡುಗಡೆ ||
ಬಲೆಗೆ ಸಿಲುಕಿದ ಮೀನಿನಂದದಿ
ಮನುಜಕುಲವಿಲ್ಲಲೆದಿದೆ |
ತನ್ನ ನೂಲೊಳು ತಾನೆ ಸಿಲುಕಿದೆ
ತೆರಣಿ ಹುಳುವಿನ ತೆರನಿದೆ ||