ನಿನ್ನೊಲವಿನ ಮಡಿಲೊಳಡಗಿ
Category: ಶ್ರೀದೇವಿ
Author: ವಚನವೇದ
ನಿನ್ನೊಲವಿನ ಮಡಿಲೊಳಡಗಿ
ನಿನ್ನೆಡೆಗೇ ಕಣ್ಣ ಚಾಚಿ
ಓ ತಾಯೀ--ಎನ್ನುವೆ ||
ಚಿದಾನಂದ ರಸಧಿಯಲ್ಲಿ
ಮಹಾಯೋಗನಿದ್ರೆಯಲ್ಲಿ
ನಾನು ಮುಳುಗಿ ಹೋಗುವೆ ||
ತೆರೆದೆವೆಗಳ ಮುಚ್ಚಲಾರೆ
ಭವಭಯದಲಿ ಲೀನನಾದೆ
ನಿನ್ನೊಲವಿನ ಮಡಿಲಿನಲ್ಲಿ
ಸ್ನೇಹಾಂಚಲದಾಸರೆಯಲಿ
ನನ್ನನಿರಿಸು ಎನ್ನುವೆ ||