ಜಯ ಜಗದಂಬ ಮಾ ಜನನಿ ಶ್ಯಾಮಾ

Category: ಶ್ರೀದೇವಿ

Author: ಸ್ವಾಮಿ ಪುರುಷೋತ್ತಮಾನಂದ

ಜಯ ಜಗದಂಬ ಮಾ ಜನನಿ ಶ್ಯಾಮಾ
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ॥

ಮಮ ಹೃದಯಕಮಲದಿ ವಾಸಿಸು ಮುದದಿ
ಸದಾ ನಿನ್ನ ಪರಮಧ್ಯಾನ ಗ್ರಹೇ ಹೃದಯದಿ |
ನಿನ್ನ ಕಂದ ನಾನು ಕರೆಯುತಿಹೆ
ಲಾಲಿಸೆನ್ನ ಹೇ ರಮಾ |
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ॥

ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ
ಪರಾಭಕ್ತಿಗಮ್ಯೆ ನೀನು ಭವತಾರಿಣೀ |
ನಿನ್ನ ನಂಬಿ ಕರೆವೆ ನಮನಗೈವೆ
ನಲಿದು ಬಾರೆ ಹೇ ರಮಾ |
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ॥