ಎಲ್ಲಿ ಅರಸುವೆ ನೀನು
Category: ಇತರೆ
Author: ವಚನವೇದ
ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ
ನಿನ್ನ ಬಳಿಯೇ ನಾನು ವಾಸಿಸಿರುವೆ |
ನಾನು ನಿನ್ನೊಂದಿಗೇ ಇದ್ದರೂ ನನಗಾಗಿ
ಎಲ್ಲೊ ದೂರದಿ ಹುಡುಕಿ ಬಳಲುತಿರುವೆ ||
ನಾನು ಚರ್ಮದೊಳಿಲ್ಲ ರೋಮದೊಳಗೂ ಇಲ್ಲ
ಅಸ್ಥಿಯಲೊ ಮಾಂಸದಲೊ ಹುದುಗಿಕೊಂಡಿಲ್ಲ |
ಗುಡಿಮಸೀದಿಯೊಳಿಲ್ಲ ಕಾಶಿಕೈಲಾಸದಲೊ
ದ್ವಾರಕೆ ಅಯೋಧ್ಯೆಯೊಳೊ ದೊರೆವನಲ್ಲ ||
ಸಂನ್ಯಾಸದೊಳಗಿಲ್ಲ ವೈರಾಗ್ಯದೊಳಗಿಲ್ಲ
ಯೋಗಾದಿ ಸಿದ್ಧಿಗೂ ದೂರ ನಾನು |
ಶ್ರದ್ದೆ ಎಲ್ಲಿರುವುದೊ ಅಲ್ಲಿ ದೊರೆಯುವೆ ನಾನು
ನನಗಾಗಿ ಹುಡುಕಿದರೆ ದೊರೆವೆ ನಾನು ||