ಎಂದಿಗಾಹುದೋ ನಿನ್ನ ದರುಶನ

Category: ಶ್ರೀಕೃಷ್ಣ

Author: ವಿಜಯದಾಸ

ಎಂದಿಗಾಹುದೋ ನಿನ್ನ ದರುಶನ
ಇಂದಿರೇಶ ಶ್ರೀ ಗೋವಿಂದ ಮುಕುಂದ ||

ತಂದೆ ತಾಯಿ ನೀನೇ ಬಂಧು ಬಳಗ ನೀನೇ
ಎಂದು ಭಜಿಸುವಾ ಆನಂದ ಗೋವಿಂದ |
ಸರಸಿಜೋದ್ಭವಾ ಶ್ರೀಹರೀಶನಾದ ನಿನ್ನ
ಸ್ಮರಿಸುವಾ ಸುಖ ಎಂದಿಗಾಹುದೋ ||

ಅಜಭವಾದಿಗಳು ಆನಂದದಿಂದಲಿ
ಭಜಿಸಿ ಪಾಡುವಾ ನಿನ್ನ ಸುಖವು |
ದೀನವತ್ಸಲ ಶ್ರೀನಿಕೇತನಾ
ಮಾನದಿಂದ ನಿನ್ನ ಧ್ಯಾನವೇ ಸುಖವು ||

ಭಯನಿವಾರಣ ಭಕ್ತವತ್ಸಲ
ವಿಜಯಸಾರಥಿ ವಿಜಯವಿಟ್ಠಲನೆ ||