ಜಯ ಜಯ ರಾಮಕೃಷ್ಣ

Category: ಶ್ರೀರಾಮಕೃಷ್ಣ

Author: ಸ್ವಾಮಿ ಪ್ರೇಮೇಶಾನಂದ

ಜಯ ಜಯ ರಾಮಕೃಷ್ಣ ಭುವನಮಂಗಲ
ಜಯ ಮಾತಾ ಶ್ಯಾಮಾಸುತಾ ಅತಿ ನಿರಮಲ |
ಜಯ ವಿವೇಕಾನಂದ ಪರಮ ದಯಾಲ
ಪ್ರಭೂರ್ ಮಾನಸಸುತ ಜಯ ಶ್ರೀರಾಖಾಲ ||

ಜಯ ಪ್ರೇಮಾನಂದ ಪ್ರೇಮಮಯ ಕಲೇವರ
ಜಯ ಶಿವಾನಂದ ಜಯ ಲೀಲಾ ಸಹಚರ |
ಯೋಗಿ ಯೋಗಾನಂದ ಜಯ ನಿತ್ಯನಿರಂಜನ
ಜಯ ಶಶಿ ಗುರುಪದೇ ಗತ ತನುಮನ||

ಸೇವಾಪರ ಯೋಗಿವರ ಅದ್ಭುತಆನಂದ
ಅಭೇದಾನಂದ ಜಯ ಗತ ಮೋಹಬಂಧ |
ಯೋಗರತ ತ್ಯಾಗವ್ರತ ತುರೀಯ ಆಖ್ಯಾತ
ಶರತ ಸುಧೀರ ಶಾಂತ ಜೇನೊ ಗಣನಾಥ ||

ಜೀವೇ ಶಿವ ಸೇವಾವ್ರತ ಗಂಗಾಧರ ವೀರ
ಜಯ ಶ್ರೀವಿಜ್ಞಾನಾನಂದ ಪ್ರಶಾಂತ ಗಂಭೀರ|
ಪ್ರವೀಣ ಗೋಪಾಲ ಮಾತೃಸೇವಾ ಪರಾಯಣ
ಸಾರದಾ ಸಾರದಾಪದೇ ಗತ ಪ್ರಾಣಮನ||

ಬಾಲಕಚರಿತ್ರ ಜಯ ಸುಬೋಧ ಸರಲ
ನಾಗವರ ತ್ಯಾಗವೀರ ವಿವೇಕ ಸಂಬಲ|
ಕಥಾಮೃತ ವರ್‌ಷಣ ಗೌರ ಜಲಧರ
ಗಿರಿಶ ಭೈರವ ಜಯ ವಿಶ್ವಾಸ ಆಕಾರ ||

ರಾಮಕೃಷ್ಣ ದಾಸದಾಸ ಜಯ ಸಬಾಕಾರ
ರಾಮಕೃಷ್ಣ ಲೀಲಾಸ್ಥಾನ್ ಜಯ ಬಾರಬಾರ|
ರಾಮಕೃಷ್ಣ ನಾಮ ಜಯ ಶ್ರವಣಮಂಗಲ
ಭಕತ ವಾಂಛಿತ ಜಯ ಚರಣಕಮಲ ||