ಏನು ನಿರುಪಮ ಸೊಬಗು
Category: ಪರಬ್ರಹ್ಮ
Author: ವಚನವೇದ
ಏನು ನಿರುಪಮ ಸೊಬಗು, ಓಹೋ
ಎಂಥ ಚೆಲುವಿನ ಮೋಹನ |
ನನ್ನ ಹೃದಯದ ಮೂರ್ತಿ ಬಂದನು
ಎದೆಯ ಗುಡಿಸಲಿಗೀದಿನ |
ಎದೆಯೊಳೊಲವಿನ ಚಿಲುಮೆ ಚಿಮ್ಮಿವೆ
ಹತ್ತು ಕಡೆಗೂ ಸುಮ್ಮನೆ |
ಯಾವ ಸಂಪದವನ್ನು ಸುರಿಯಲಿ
ಹೇಳು ನಿನ್ನೀ ಪದದೆಡೆ ?
ನನ್ನ ಹರಣವೆ ಶರಣು ನಿನಗೆ,
ನನ್ನ ಆತ್ಮವೆ ನಿನ್ನದು;
ಮತ್ತೆ ಏನನು ನೀಡಲಯ್ಯಾ ?
ನನ್ನದೆಲ್ಲವು ನಿನ್ನದು |