ಏಳು ತಾಯಿ, ಏಳು ತಾಯಿ

Category: ಶ್ರೀದೇವಿ

Author: ವಚನವೇದ

ಏಳು ತಾಯಿ, ಏಳು ತಾಯಿ,
ಎಷ್ಟು ಕಾಲ ನಿದ್ದೆಗೈವೆ
ಮೂಲಾಧಾರ ಪದ್ಮದಿ ||

ಏಳು ತಾಯಿ ಶಿವನಿರುವಾ ಸಾವಿರದಳ
ಕಮಲವರಳಲೆನ್ನ ಶಿರೋಮಧ್ಯದಿ
ಷಟ್‌ಚಕ್ರವ ಭೇದಿಸಮ್ಮ
ಮನದ ವ್ಯಥೆಯ ನೀಗಿಸಮ್ಮ
ಓ ಚೇತನ ರೂಪಿಣಿ ||