ಕಮಲವದನ ಕಲುಷಹರಣ
Category: ಶ್ರೀರಾಮಕೃಷ್ಣ
Author: ಸ್ವಾಮಿ ತದ್ರೂಪಾನಂದ
ಕಮಲವದನ ಕಲುಷಹರಣ
ನಿನಗೆ ನಮನ ರಾಮಕೃಷ್ಣ||
ಧರಮಸ್ಥಾಪನ ನಿನ್ನಾಗಮನ
ಪರಮಪಾವನ ನಿನ್ನ ಭಜನ |
ಕೊಡುವೆ ನಿನಗೆ ಹೃದಯದಾಸನ
ಕಳೆಯೋ ಎನ್ನ ಜನುಮಮರಣ ||
ಜಗದ ಜೀವನ ಪುಣ್ಯಕಥನ
ವಿಜಿತಮದನ ಕರಮ ದಹನ |
ರಚಿಸಿ ನೀನು ವಿಶ್ವಕವನ
ನೀಡುತಿರುವೆ ತವ ದರುಶನ ||
ವಿಶ್ವಮೋಚನ ತವಗುಣಗಾನ
ಚಿತ್ತಶೋಧನ ನಿನ್ನನುಧ್ಯಾನ |
ನನ್ನದೆನುವ ತನುಮನಧನ.
ನಿನಗೆ ಅರ್ಪಣ ಹೇ ಮಮ ಜೀವನ ||