ಕರುಣ ಶೀತಲ
Category: ಭಗವಾನ್ ಬುದ್ಧ
Author: ಸ್ವಾಮಿ ಶಾಸ್ತ್ರಾನಂದ
ಕರುಣ ಶೀತಲ ಕಿರಣ ಶೋಭಿತ
ತರಣಿ ನಿನ್ನಯ ಚರಣಕೆರಗುವೆ ||
ಕಾಮ ಮೋಹದ ತಮವ ಕಳೆಯಲು
ಪ್ರೇಮ ಜ್ಯೋತಿಯ ಕಾಂತಿ ಬೆಳಗಿಹೆ |
ವಿಷಮ ಶೈತ್ಯದಿ ಭೀತ ಜಗಕೆ
ಸೌಮ್ಯ ಸಮತೆಯ ಸ್ಥೈರ್ಯ ನೀಡಿಹೆೆ ||
ಕರ್ಮಕಾಂಡದ ಕ್ರೌರ್ಯ ಜಡತೆಯಿಂ
ಧರ್ಮಶಾಸ್ತ್ರದ ಶುಷ್ಕವಾದದಿಂ |
ಧರ್ಮಬಾಳ್ವೆಯ ಸಲಹಲೆಂದು
ಧರ್ಮಮೂರುತಿ ಇಳಿದು ಬಂದೆ ||
ಸರ್ವಧರ್ಮದ ಸರ್ವಕರ್ಮದ
ಸರ್ವಸಾರವ ತೆರೆದು ತೋರಿದೆ
ಸರ್ವಸೃಷ್ಟಿ ವಿಮುಕ್ತಿಸಾಧಕ
ಸರ್ವತ್ಯಾಗಿ ಸಾರ್ವಭೌಮ ||