ಕರುಣಾಕರ ಹರ ಶೂಲಧರನೇ

Category: ಶ್ರೀಶಿವ

ಕರುಣಾಕರ ಹರ ಶೂಲಧರನೇ |
ವರಗೌರೀಪತಿ ಸಾಂಬ ಸದಾಶಿವ||

ಪರಮದಯಾಕರ ಪರಮೇಶ್ವರನೇ |
ವರಫಣಿಭೂಷಣನೇ ಪರಶಿವನೇ ||

ಫಾಲವಿಲೋಚನ ಗಂಗಾಧರನೇ |
ಪಾಲಿಸು ಎಮ್ಮನು ರಜತಗಿರೀಶನೇ ||

ಕೈಲಾಸಾಧಿಪ ಕೈವಲ್ಯಪ್ರದ |
ಬಾಲಚಂದ್ರಧರನೇ ಸ್ಮರಹರನೇ ||