ಕರುಣಿಸೆನ್ನ ಹರಿಯ ರಮಣಿ
Category: ಶ್ರೀಮಹಾಲಕ್ಷ್ಮಿ
ಕರುಣಿಸೆನ್ನ ಹರಿಯ ರಮಣಿ
ವರದ ಲಕುಮಿದೇವಿಯೆ
ಕಮಲಭಾಣಜನನಿ ದಿವ್ಯ-
ಕಮಲಪಾಣಿ ರಾಜಿತೇ ||
ಸಕಲನಿಗಮವಿನುತಚರಣೇ
ಸಕಲಭಾಗ್ಯದಾಯಿನಿ
ಸಕಲಮೌನಿನಿಕರವಂದ್ಯ
ಸಕಲಲೋಕನಾಯಕಿ ||
ಶರಧಿತನುಜೇ ಮಂಗಳಾಂಗಿ
ಪರಮಸೌಖ್ಯದಾಯಿನಿ
ವರದವೆಂಕಟಾದ್ರಿವರನ
ಪುರನಿವಾಸೇ ಮೋಹಿನಿ ||