ಕಳೆಯಬೇಕೆ ದಿನಗಳೆಲ್ಲ
Category: ವೈರಾಗ್ಯ
ಕಳೆಯಬೇಕೆ ದಿನಗಳೆಲ್ಲ
ವಿಫಲವಾಗಿ ಹೋಗಿಯೇ |
ಹಗಲು ಇರುಳು ಆಶಾಪಥವ
ಕಾಯುತಿಹೆನು ಸ್ವಾಮಿಯೇ ||
ತ್ರಿಭುವನಗಳ ನಾಥ ನೀನು
ಭಿಕಾರಿ ಅನಾಥ ನಾನು |
ಕರೆಯಲೆಂತು ಮಮ ಹೃದಯದಿ
ನೆಲೆಸು ಎಂದು ಹೀಗೆಯೇ ||
ಹೃದಯ ಕುಟಿಯ ದ್ವಾರಗಳನು
ಅನವರತವು ತೆರೆದಿರುವೆನು |
ಕೃಪೆಯ ತೋರಿ ಬಂದು ನೀಡು
ಶಾಂತಿಯನ್ನು ಸ್ವಾಮಿಯೇ ||