ಕಂಗಳಿವ್ಯಾತಕೋ

Category: ಶ್ರೀಕೃಷ್ಣ

Author: ಶ್ರೀಪಾದರಾಜಸ್ವಾಮಿ

ಕಂಗಳಿವ್ಯಾತಕೋ ಕಾವೇರಿರಂಗನ ನೋಡದ ||

ಜಗಂಗಳೊಳಗೆ ಮಂಗಳಮೂರುತಿ
ರಂಗನ ಶ್ರೀಪಾದಂಗಳ ನೋಡದ ||

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು |
ಚಂದ್ರ ಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದಲಿ ರಂಗನ ಕಾಣದ ||

ಹರಿಪಾದೋದಕಸಮ ಕಾವೇರಿ
ವಿರಜಾ ನದಿಲಿ ಸ್ನಾನವ ಮಾಡಿ |
ಪರಮ ವೈಕುಂಠ ರಂಗ ಮಂದಿರ
ಪರವಾಸುದೇವನ ನೋಡದ ||

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರ ಪದಕ |
ತೇರನೇರಿ ಬೀದಿಲಿ ಬರುವ
ರಂಗವಿಟ್ಠಲರಾಯನ ನೋಡದ ||