ಕೃಷ್ಣನ ನೆನೆದರೆ
Category: ಶ್ರೀಕೃಷ್ಣ
Author: ಪುರಂದರದಾಸ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ|
ಕೃಷ್ಣ ಎನಬಾರದೆ ||
ನರಜನ್ಮ ಬಂದಾಗ ನಾಲಿಗೆ ಇದ್ದಾಗ
ಕೃಷ್ಣ ಎನಬಾರದೆ ||
ಮಲಗೆದ್ದು ಮೈಮುರಿದು ಏಳುತಲೊಮ್ಮೆ
ಕೃಷ್ಣ ಎನಬಾರದೆ ||
ಸುಳಿದಾಡುತ ಮನೆಯೊಳಗಾದರು ಒಮ್ಮೆ|
ಕೃಷ್ಣ ಎನಬಾರದೆ ||
ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ|
ಕೃಷ್ಣ ಎನಬಾರದೆ ||
ದಾರಿಯ ನಡೆವಾಗ ಭಾರವ ಹೊರುವಾಗ |
ಕೃಷ್ಣ ಎನಬಾರದೆ ||
ನೀಗದಾಲೋಚನೆ ರೋಗೋಪದ್ರದಲೊಮ್ಮೆ|
ಕೃಷ್ಣ ಎನಬಾರದೆ ||
ಪರಿಪರಿ ಕೆಲಸದೊಳೊಂದು ಕೆಲಸವೆಂದು |
ಕೃಷ್ಣ ಎನಬಾರದೆ ||
ದುರಿತ ರಾಶಿಗಳನು ತರಿದು ಬಿಸಾಡಲು|
ಕೃಷ್ಣ ಎನಬಾರದೆ ||
ಗರುಡವಾಹನ ಸಿರಿ ಪುರಂದರವಿಟ್ಠಲನ್ನೆ |
ಕೃಷ್ಣ ಎನಬಾರದೆ ||