ಅರಿತೆ ನಾನು ಅರಿತೆ ನಾನು

Category: ಇತರೆ

Author: ವಚನವೇದ

ಅರಿತೆ ನಾನು ಅರಿತೆ ನಾನು
ನಿಜದ ನೆಲೆಯನರಿತೆನು |
ಭಾವದಂತರಂಗವರಿತ
ವ್ಯಕ್ತಿಯೊಬ್ಬ ದೊರೆತನು ||

ಎಂದೆಂದೂ ಇರುಳಿಲ್ಲದ
ಬೆಳಕಿನೂರಿನಿಂದ ಅವನು
ನಮ್ಮಲ್ಲಿಗೆ ಬಂದನು |
ಅವನ ಸಂಗದಿಂದ ನಾನು
ಹಗಲಾವುದು ಇರುಳಾವುದು
ಎಂಬುದನ್ನೂ ತಿಳಿಯೆನು ||

ಜಪತಪಾದಿ ಕರ್ಮಗಳೂ
ನೀರಸವೆಂದರಿತೆ ನಾನು
ಹಳೆಯ ನಿದ್ರೆ ಹರಿಯಿತು |
ತೂಕಡಿಸುವುದೆಲ್ಲಿ ಬಂತು
ನಿರಂತರವು ಯೋಗದಲ್ಲಿ
ಎಚ್ಚರಿರುವುದಾಯಿತು ||