ಕ್ಷಾಂತಿ ಸಹನೆಯ
Category: ಶ್ರೀಗುರು
Author: ಸ್ವಾಮಿ ಶಾಸ್ತ್ರಾನಂದ
ಕ್ಷಾಂತಿ ಸಹನೆಯ ಶಾಂತ ಶೀತಲ
ಕಾಂತಿಯಿಂದಲಿ ಬೆಳಗುವಾ ಶಶಿ |
ಅಂತರಂಗದ ಭಕುತಿ ಭೂಷಣ
ಸಂತರಾಜ್ಯದ ಚಕ್ರವರ್ತಿ ||
ಗುರುವೆ ನಿನ್ನಯ ಪರಮ ದೈವವು
ಗುರುವಿನಾಣತಿ ಹಿರಿಯ ವೇದವು |
ಗುರುವಿಗಾಳ್ತನ ಚರಮ ಸಾಧನ
ಗುರುವಿಗೋಸುಗ ಧರಿತಪ್ರಾಣವು ||
ಕಾಮಕಾಂಚನ - ತ್ಯಾಗಿ ತಾಪಸಿ
ಪ್ರೇಮಪೂರಿತ ಕರ್ಮಯೋಗಿ |
ರಾಮಕೃಷ್ಣರ ದಿವ್ಯದಾಸ
ರಾಮಕೃಷ್ಣಾನಂದ ನಮಿಪೆವು ||