ಕ್ಷೀಣಪ್ರಾಣ ಹೀನತ್ರಾಣ

Category: ಶ್ರೀಸ್ವಾಮಿ ವಿವೇಕಾನಂದ

Author: ಸ್ವಾಮಿ ಶಾಸ್ತ್ರಾನಂದ

ಕ್ಷೀಣಪ್ರಾಣ ಹೀನತ್ರಾಣ
ದೀನ ಭಾರತೀಯ ಜನಕೆ |
ಪ್ರಾಣ ಮಾನ ದಾನಗೈದ
ಮಾನವೇಂದ್ರ ಸ್ವಾಮಿಯೇ ||

ಸ್ಮರಿಸಿ ನಿಮ್ಮ ಹಿರಿಯ ಪದವ
ಧರಿಸಿ ಹೆಮ್ಮೆ ಧೈರ್ಯ ಬಲವ |
ಸಿರಿಯ ಆತ್ಮ ನೀವು ಎನುತ
ಮೊರೆದ ಅಭಯವಾಣಿಯೇ ||

ತ್ಯಾಗ ಸೇವೆ ನಿಮ್ಮ ನಾಡ
ಭಾಗ್ಯವೆಂದು ನಂಬಿ ನಡೆಯೆ |
ಭೋಗ ಯೋಗ ಸಿದ್ದವೆಂದ
ಯೋಗಿವರನೆ ವಂದಿಪೆ ||