ಗಜವದನ ಬೇಡುವೆ

Category: ಶ್ರೀಗಣೇಶ

Author: ಪುರಂದರದಾಸ

ಗಜವದನ ಬೇಡುವೆ ಗೌರೀತನಯ|
ತ್ರಿಜಗವಂದಿತನೆ ಸುಜನರ ಪೊರೆವನೆ ||

ಪಾಶಾಂಕುಶ ಮುಸಲಾದ್ಯಾಯುಧಧರ |
ಮೂಷಕವಾಹನ ಮುನಿಜನ ಪ್ರೇಮ ||

ಮೋದದಿಂದಲಿ ನಿನ್ನ ಪಾದವ ನಂಬಿದೆ |
ಸಾಧುವಂದಿತನೆ ಅನಾದರ ಮಾಡದೆ ||

ಸರಸಿಜನಾಭ ಶ್ರೀ ಪುರಂದರವಿಟ್ಠಲನ |
ನಿರುತ ನೆನೆಯುವಂತೆ ವರ ದಯಮಾಡೋ ||