ದಶಾವತಾರದ ಲೀಲೆಗಳು

Category: ಶ್ರೀಕೃಷ್ಣ

Author: ಕನಕದಾಸ

ಅಂಬುಜದಳಾಕ್ಷಗೆ ಮಂಗಳ
ಸರ್ವ ಜೀವರಕ್ಷಕಗೆ ಮಂಗಳ

ಜಲಧಿಯೊಳಾಮ್ನಾಯ ತಂದಗೆ ಮಂಗಳಕುಲಗಿರಿ ತಾಳ್ದಗೆ ಜಯಮಂಗಳನೆಲನ ಕದ್ದಸುರನ ಗೆಲಿದಗೆ ಮಂಗಳಚೆಲುವ ನರಸಿಂಹಗೆ ಶುಭಮಂಗಳ ||1||

ವಸುಧೆಯ ಈರಡಿಗೈದಗೆ ಮಂಗಳವಸುದಾಧಿಪರಳಿದಗೆ ಜಯಮಂಗಳದಶಕಂಧರನನ್ನು ಗೆಲಿದಗೆ ಮಂಗಳಪಶುಗಳ ಕಾಯ್ದಗೆ ಶುಭ ಮಂಗಳ  ||2||

ಪುರ ತ್ರಯ ವಧುಗಳ ಗೆಲಿದಗೆ ಮಂಗಳತುರಗ ವಾಹನನಿಗೆ ಜಯ ಮಂಗಳವರ ನೆಲೆಯಾದಿಕೇಶವನಿಗೆ ಮಂಗಳಪರಮ ಪತ್ನಿವ್ರತಗೆ ಶುಭ ಮಂಗಳ  ||3||