ಗೋವರ್ಧನ ಗಿರಿಧರ ಗೋವಿಂದ
Category: ಶ್ರೀಕೃಷ್ಣ
Author: ನಾರಾಯಣತೀರ್ಥ
ಗೋವರ್ಧನ ಗಿರಿಧರ ಗೋವಿಂದ
ಗೋಕುಲಪಾಲಕ ಪರಮಾನಂದ |
ಶ್ರೀವತ್ಸಾಂಕಿತ ಶ್ರೀಕೌಸ್ತುಭಧರ
ಭಾವಕ ಭಯಹರ ಪಾಹಿ ಮುಕುಂದ ||
ಆನಂದಾಮೃತವಾರಿಧಿ ಖೇಲ
ಅಲಘು ಪರಾಕ್ರಮ ಅನುಪಮಶೀಲ |
ಶ್ರೀನಂದಾತ್ಮಜ ಶ್ರಿತಜನಪಾಲ
ಶ್ರೀಕರಕಿಸಲಯ ಲಾಲನಲೋಲ ||
ಪಾಟಿತ ಸುರರಿಪು ಪಾದಪವೃಂದ
ಪಾವನಚರಿತಪರಾಮೃತಕಂದ |
ನಾಟ್ಯರಸೋತ್ಕಟ ನಾನಾಭರಣ
ನಾರಾಯಣತೀರ್ಥ ವಂದಿತಚರಣ ||