ಗೋವಿಂದ ಗೋವಿಂದ

Category: ಶ್ರೀಕೃಷ್ಣ

Author: ಪುರಂದರದಾಸ

ಗೋವಿಂದ ಗೋವಿಂದ ಅತಿ ಆನಂದ
ಸಕಲ ಸಾಧನ ನಿನ್ನಾನಂದ ||

ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಗೋವಿಂದ |
ನಿರ್ಮಲಾತ್ಮಕನಾಗಿ ಇರುವುದೇ ಆನಂದ ||

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ |
ಈ ಪರಿ ಮಹಿಮೆಯ ತಿಳಿಯೋದೆ ಆನಂದ ||

ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ |
ಹಿಂಗದೆ ದಾಸರ ಸಲಹೋದೆ ಆನಂದ ||