ಅಲೆದಲೆದು ಅತಿದಣಿದು
Category: ಶ್ರೀಶಾರದಾದೇವಿ
Author: ಸ್ವಾಮಿ ತದ್ರೂಪಾನಂದ
ಅಲೆದಲೆದು ಅತಿದಣಿದು ನಲೆಗಾಣ್ದೆ ನಿನ್ನಡಿಗೆ
ಎಲೆ ತಾಯೆ ಕಡೆಗಿಂದು ಬಂದೆಮ್ಮ ಸಲಹು ||
ಕೊನೆಯಿಲ್ಲ ಕೊರೆಯಿಲ್ಲ ಈ ನಮ್ಮ ದುಃಖಕ್ಕೆ
ಮನದಲ್ಲಿ ಬನದಲ್ಲಿ ನೆಮ್ಮದಿಯು ಇನಿತಿಲ್ಲ |
ಜನುಮಗಳು ಕಳೆಕಳೆದು ದುಃಖ ಮಿತಿಮೀರುತಿದೆ
ಜನನಿ ಮಂಗಳಮೂರ್ತಿ ಕಳೆಯೆಮ್ಮ ಕಲುಷಾರ್ತಿ ||
ಪರಮಹಂಸರ ಕರುಣೆರೂಪಿಣಿಯೆ ನೀ ತಾಯೆ
ಪರತನವನರಿಯದಿಹ ಪ್ರೇಮದಂಬುಧಿ ಜಲವ |
ಎರೆದೆಮ್ಮನುದ್ದರಿಸು ಪತಿತಪಾವನೆ ಮಾತೆ
ಸಾರದಾಯಿನಿ ಪರಮೆ ಅಕಳಂಕಚರಿತೆ ||