ಚಂದ್ರಚೂಡ ಶಿವಶಂಕರ

Category: ಶ್ರೀಶಿವ

Author: ಪುರಂದರದಾಸ

ಚಂದ್ರಚೂಡ ಶಿವಶಂಕರ ಪಾರ್ವತಿ |
ರಮಣ ನಿನಗೆ ನಮೋ ನಮೋ ನಮೋ ||

ಸುಂದರ ಮೃಗಧರ ಪಿನಾಕ ಧನುಕರ |
ಗಂಗಾಶಿರ ಗಜಚರ್ಮಾಂಬರಧರ ||

ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ |
ಧರಿಸಿದ ಪರಮ ವೈಷ್ಣವ ನೀನೇ ||
ಗರುಡಗಮನ ಶ್ರೀ ಪುರಂದರ ವಿಟ್ಠಲನ |
ಪ್ರಾಣಪ್ರಿಯನೇ ನಮೋ ನಮೋ ||