ಜಗವ ಸುತ್ತಿರುವುದು ನಿನ್ನ ಮಾಯೆ

Category: ಶ್ರೀಶಿವ

Author: ಬಸವಣ್ಣ

ಜಗವ ಸುತ್ತಿರುವುದು ನಿನ್ನ ಮಾಯೆ
ನಿನ್ನ ಸುತ್ತಿರುವುದೆನ್ನ ಮನ ನೋಡಾ ||

ಕರಿಯು ಕನ್ನಡಿಯೊಳಗಡಗಿದಂತಯ್ಯ
ನೀನೆನ್ನೊಳಡಗಿಹೆ ಕೂಡಲಸಂಗಯ್ಯ ||