ಕೊಡಲು ನೀನಾರು ಬಿಡಲು ನೀನಾರು
Category: ಶ್ರೀಕೃಷ್ಣ
Author: ಕನಕದಾಸ
ಕೊಡಲು ನೀನಾರು ಬಿಡಲು ನೀನಾರು
ಪೊಡವಿಗೊಡೆಯ ಶ್ರೀಹರಿಲೀಲೆಯದು ||ಪ||
ಮಾಡಲು ನೀನಾರು ಮಾಡೆನಲು ನೀನಾರು
ಮಾಡದವರಿಂದ ಮಾಡಿಪ ಮೋಡಿರೂಪ
ಮಾಡಬೇಕೆಂಬರ ತಡೆದು ಕಾಡಿಪನವನು
ಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ ||1||
ಪಾಡುವ ಪದ್ಯಗಳಲಿ ಭಾವವಾಗಿರುವ
ನೋಡುವ ನೋಟಗಳ ನೋವು ಗ್ರಹಿಸುವ
ನುಡಿವ ನುಡಿಯ ತಾತ್ಪರ್ಯವನರಿವ
ನಾಡಿ ನರಗಳಂತೊಲಿವ ಆದಿಕೇಶವರಾಯ ||2||