ದಾಸ ದಾಸರ ಮನೆಯ ದಾಸಿಯರ ಮಗ ನಾನು

Category: ಶ್ರೀಕೃಷ್ಣ

Author: ಕನಕದಾಸ

ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ

ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ ||1||

ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ ||2||

ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ ||3||