ನಮಗೆಲ್ಲಿ ಮನೆಗಳಯ್ಯ ನಾರಾಯಣ

Category: ಶ್ರೀಕೃಷ್ಣ

Author: ಕನಕದಾಸ

ನಮಗೆಲ್ಲಿ ಮನೆಗಳಯ್ಯ ನಾರಾಯಣ
ಕಮಲ ಬ್ರಹ್ಮಾಂಡ ಕೋಟಿ ಒಡಲೊಳು ತಾಳ್ದಂಥರ
ಮಾಧವ ನಿಮಗೆ ನೀರೊಳಗೆ ವಾಸವಾಯಿತು

ಜಲನಿಧಿಯನುತ್ತರಿಸಿ ಲಂಕೆಯನೈವುದಕೆ
ಕುಲಗಿರಿಯ ಕಿತ್ತು ತಂದು ಸೇತುವೆ ಕಟ್ಟಿಸಲೆ
ದೈತ್ಯನ ಕೊಂದು ಸೀತೆಯ ತಂದನಿಗೆ ಗಿರಿ
ತಲೆಯ ಮೇಲೆ ಇಹ ಪ್ರಾಪ್ತಿಯಾಯಿತು ||1||

ಪೃಥ್ವಿಯ ತಲೆಯನು ಪರೆಮಾಡಿ ತಾಳಿದ
ಳುತ್ಯಾನಮಮ್ಮನ ತಂದೆಯ ಮೆಲುವನ
ಮೃತ್ಯುನಾಶಕನೆಂದು ಸುತ್ತಿದ್ದಾನೆ
ಹುತ್ತಿನೊಳಗೆ ಇಹ ಪ್ರಾಪ್ತಿಯಾಯಿತು ||2||

ನಾಡದೇವತೆಗಳ ಸೆರೆಗಳ ಬಿಡಿಸಿ
ಕ್ರೀಡೆಯಾಯಿತು ನಿಮ್ಮ ದಯದಿಂದಲಿ
ರೂಢಿಯೊಳತಿ ಸೇವಕನಾದ ಗರುಡನಿಗೆ
ಬೋಡು ಮರದ ಮೇಲೆ ಇಹ ಪ್ರಾಪ್ತಿಯಾಯಿತು ||3||

ಜಲನಿಧಿ ಸುತನ ಮೊಮ್ಮಗನ ಕೊಂದ
ಶೂರ ನಕುಲ ಸಹದೇವ ಪಾಂಡವರೈವರು
ಲಲನೆ ದ್ರೌಪದಿಯೊಂದಿಗೆ ವನವಾಸ ಹೋಗಿ
ಹೊಲದೊಳಗೆ ಇಹ ಪ್ರಾಪ್ತಿಯಾಯಿತು||4||

ಇಂಥಿಂಥವರಿಗೆಲ್ಲ ಮನೆಯಿಲ್ಲದಿರಲು ನ-
ನ್ನಂಥವನಿಗಿನ್ನೆಲ್ಲಿ ಇರಲು ಸಾಧ್ಯ
ಕಂತುಪಿತ ಕಾಗಿನೆಲೆಯಾದಿಕೇಶವನೆ ನಿ-
ಶ್ಚಿಂತನಾಗಿ ನಿಮ್ಮ ಗುಡಿಯಲಿಪ್ಪೆನು ||5||