ಜಯ ವಿವೇಕಾನಂದ
Category: ಶ್ರೀಸ್ವಾಮಿ ವಿವೇಕಾನಂದ
Author: ಸ್ವಾಮಿ ಶಾಸ್ತ್ರಾನಂದ
ಜಯ ವಿವೇಕಾನಂದ ಗುರುವರ
ಭುವನಮಂಗಲಕಾರಿ |
ಚಿರಸಮಾಧಿಯ ಗಿರಿಶಿಖರದಿಂ
ನರರ ಸೇವೆಗೆ ಇಳಿದ ನರವರ ||
ಸುಪ್ತ ದೈವರೆ ಏಳಿರೇಳಿ
ಲುಪ್ತಪದವಿಯ ಮರಳಿ ತಾಳಿ |
ಸಪ್ತ ಭುವಿಗಳ ಆಳಿರೆನುತ
ದೀಪ್ತವಾಣಿಯ ಜಗದಿ ಮೊಳಗಿಹೆ ||
ವಿಶ್ವವ್ಯಾಪಕ ಪ್ರೇಮಮೂರ್ತಿಯೇ
ವಿಶ್ವದ್ಯೋತಕ ಪರಮಜ್ಞಾನಿಯೇ |
ವಿಶ್ವಮುಕ್ತಿ ಸಮರ್ಪಿತಾತ್ಮನೆ
ವಿಶ್ವವಂದ್ಯನೆ ಜಯತು ಜಯತು ||