ನಿತ್ಯಂ ಪುರುಷೋತ್ತಮಂ ನ್ಯಾಯಂ

Category: ಶ್ರೀಕೃಷ್ಣ

Author: ಕನಕದಾಸ

ನಿತ್ಯಂ ಪುರುಷೋತ್ತಮಂ ನ್ಯಾಯಂ- ಅಪಮೃತ್ಯುಂ ಸಂಕಟ ಹರಣಂ

ಪರಲೋಕ ಸಾಧನ ಕರುಣಾಕರಂ
ಶರಣಾಗತ ಜನಾಧಾರಂ
ಸರಸಿಜಭವ ಭವರೋಗ ಸಂಹಾರಂ
ಪುರುಷೋತ್ತಮ ಘೋರ ವಿಹಾರಂ ||1||

ಜ್ಞಾನಭಕ್ತಿ ವೈರಾಗ್ಯ ಸುಜಾತಂ
ಜನನ ಮರಣ ರಹಿತ ಜಲನಿಧಿ ಪೋತಂ
ಘನ ದಾರಿದ್ರ್ಯ ರವಿ ತಾರಾನಾಥಂ
ಅನುಶ್ರುತ ವೈಭವ ಮಂಗಲ ಗೀತಂ ||2||

ಭೂರಿಭುವನ ಜೀವನಗುಣಂ- ಗಂಭೀರ
ಸಾರಪಲ್ಲವ ನಿಕರಾಭರಣಂ
ನಾರದ ವಾಲ್ಮೀಕ್ಯಂತಃಕರಣಂ
ವರದಾದಿಕೇಶವ ನಾದ ನಿತ್ಯಸ್ಮರಣಂ ||3||