ನಿನ್ನ ನೋಡಿ ಧನ್ಯನಾದೆನೊ ಹರಿ
Category: ಶ್ರೀಕೃಷ್ಣ
Author: ಕನಕದಾಸ
ನಿನ್ನ ನೋಡಿ ಧನ್ಯನಾದೆನೊ ಹರಿ ಶ್ರೀನಿವಾಸ
ನಿನ್ನ ನೋಡಿ ಧನ್ಯನಾದೆ
ಎನ್ನ ಮನಸು ನಯನ ಸುಪ್ರ
ಸನ್ನವಾಯಿತು ದಯವ ಮಾಡಿ
ಮುನ್ನ ಸಲಹಬೇಕು ಸ್ವಾಮಿ
ಪಕ್ಷಿವಾಹನ ಲಕ್ಷ್ಮೀರಮಣ
ರಾಕ್ಷಸಾಂತಕ ಯದುಕುಲಾನ್ವಯ
ಕುಕ್ಷಿಯೊಳು ಬ್ರಹ್ಮಾಂಡ ತಂಡವ
ರಕ್ಷಿಸುತಲಿಹ ಸುಜನ ಪಕ್ಷಾ ||1||
ದೇಶದೇಶ ತಿರುಗಿ ನಾನು
ಆಶೆಭರಿತನಾದೆ ಸ್ವಾಮಿ
ವಾಸಿ ನಿಮಗೆ ಸಲಹುವುದು ಜಗ
ದೀಶ ಕಾಯೋ ವಾಸುದೇವ ||2||
ಕಂತು ಜನಕ ಎನ್ನ ಮೊರೆಯ-
ನಾಂತು ವಿಹಿತದಿಂದ ಸೇವೆ
ಅಂತರವಿಲ್ಲದೆ ದಯಪಾಲಿಸೊ
ಶಾಂತ ಮೂರ್ತಿಯಾದಿ ಕೇಶವ ಮುದ್ದು ವಿಠಲ ||3||