ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ
Category: ಶ್ರೀಕೃಷ್ಣ
Author: ಕನಕದಾಸ
ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ ||ಪ||
ನೆನೆಯೋ ಗೋಪೀತನಯ ಕಂಸನ ಮನೆಯ ಕೊಂಡಾತನ ||ಅ||
ತರಳ- ಚೆಲುವ ಮುಂಗುರುಳ
ಹುಲಿಯುಗುರ ಕೊರಳ
ಉಂಗುರಗಳ ಬೆರಳ
ಕಾಲಿಗೆ ಕಟ್ಟಣಳ
ನಿಲುವುತಿಹ ದುರುಳ
ತನದಲಿ ತುರುಗಳ ಕಾಯ್ದವನ ||1||
ವಿಷವನುಣಿಸಿ ತಲ್ಲಣಿಸುವ
ಹುರಿತ ಸಹೊಸವ (ದುರಿತ ಸಹವಾಸವ?)
ಆದರಾವಿ ದಾಸವ (ಅದರ ವಿಲಾಸವ?)
ನೋಡಿದರೆ ಸಿಸುವಾಗಿ
ಬಲು ಅಸುರರ ಗೆಲಿದವನ ||2||
ಸಲಯ ಕಾಳಿಂಗನ
ತಲೆಪಿಡಿದ ಕಂಗೊಲೆಯ
ಮೊರೆ ಕೇಳಿ ಬಲಿಯ
ಅವನ ಕೋಮಲೆಯ ಕಿವಿಗೆ ಪೂಮಾಲೆಯಾದ ನೀಟುಗಾಯ
ನೆಲೆಯಾದಿಕೇಶವನ ||3||