ಪಕ್ಷಿ ಬಂದಿದೆ ಗಂಡಭೇರುಂಡ
Category: ಶ್ರೀಕೃಷ್ಣ
Author: ಕನಕದಾಸ
ಪಕ್ಷಿ ಬಂದಿದೆ ಗಂಡಭೇರುಂಡ- ತನ್ನ
ಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ||ಪ||
ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ||ಅ||
ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾ
ಹರುಷದಿಂದ ವೈಷ್ಣವರೆಡೆಯ ಪಾಡಿ
ಪರವ ತೋರುವೆನೆಂದು ಪಾಕವನೆತ್ತುತಾ
ಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ ||1||
ಅಕಾರ ಉಕಾರ ಮಕಾರ ಸಾಕಾರದಿಂದ
ಪರಮ ರೂಪವ ತಾಳಿ
ಅಕಾರ ಕ್ರಿಯಾ ನಾಮ ಮಕಾರವನು
ಓಂಕಾರದಿಂದ ಪುಟ್ಟಿಸಿದಂಥ ಪರವಸ್ತು ||2||
ಪಾಖಂಡವೆಂತೆಂಬ ಪರವಾದಿಗಳನ್ನು
ಲೋಕದೊಳು ತಮ್ಮೊಳಗೈಕ್ಯಮಾಡಿ ಜಗ
ದೇಕ ಪತಿ ತಿರುವಕೋವಲೂರಿನೊಳಿರುವಂಥಾ
ದಿಕೇಶವರಾಯ ತಾನಾದ ಪರವಸ್ತು ||3||