ಜಯತು ಗುರು ವಿವೇಕಾನಂದ

Category: ಶ್ರೀಸ್ವಾಮಿ ವಿವೇಕಾನಂದ

Author: ಪ್ರಭುಪ್ರಸಾದ್

ಜಯತು ಗುರು ವಿವೇಕಾನಂದ
ಜಯತು ಸ್ವಾಮೀಜೀ||

ರಾಮಕೃಷ್ಣಹೃದಯಕಿರಣ
ನಿನ್ನ ಪದಕೆ ಕೋಟಿ ನಮನ||

ರಾಮಕೃಷ್ಣಹೃದಯಕಿರಣ
ನಿನ್ನ ಪದಕೆ ಕೋಟಿ ನಮನ||

ಬಂಧ ಮುಕ್ತಿ ಪಡೆದ ಬಾಳು ಉಲ್ಲಾಸದಿ ನಲಿದಿದೆ
ದೀನದಲಿತರೆದೆಯ ನೆಲದಿ ಹೊಸ ಭರವಸೆ ಚಿಮ್ಮಿದೆ||

ಮೂಕ ಮೂಢ ಜನರ ಮುಖದಿ
ನುಡಿಯ ಬೆಳಕು ಅರಳಿದೆ
ಮೃತಸಮಷ್ಟಿ ಲೋಕಹೃದಯ
ಜೀವದುಂಬಿ ಮಿಡಿದಿದೆ||

ತಮ ಸಮುದ್ರ ಮಥಿಸಿತಂದ
ಮಹಾಮಂತ್ರ ನೀಡಿದೆ
ಅಭೀ ಎಂಬ ಆಭಯ ನುಡಿಯ
ಆತ್ಮನಿಧಿಯ ಮಾಡಿದೆ||

ಮಹಾಮಾಯೆಯೆಸೆದ ಜಾಲ
ಆಯಿತೀಗ ನಿಷ್ಫಲ
ಎಲ್ಲ ಬಗೆಯ ದ್ವಂದ್ವಭಾವ-
ವಳಿದು ಬಂತು ಶಿವಫಲ||