ಬಂಧುಗಳದಾರಿಗಾರಿದ್ದರೇನು

Category: ಶ್ರೀಕೃಷ್ಣ

Author: ಕನಕದಾಸ

ಬಂಧುಗಳದಾರಿಗಾರಿದ್ದರೇನು - ಇಷ್ಟ
ಬಂಧು ತ್ರೈಜಗಕೆ ಶ್ರೀಹರಿಯಲ್ಲದೆ - ಮಿಕ್ಕ
ಬಂದುಗಳದಾರಿಗಾರಿದ್ದರೇನು

ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ - ಆ
ನೆಗಳೇನ ಮಾಡುತಿರ್ದವಡವಿಯಲಿ
ನಗಜೆಯಾಳ್ದನ ಬ್ರಹ್ಮೇತಿ ಬಂದು ಕಾಡಲಾಗಿ ರುದ್ರಾ
ದಿಗಳೇನ ಮಾಡುತಿರ್ದರಾ ಶೈಲದೊಳಗೆ ||1||

ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲು
ಮಂಡಲ ಪತಿ ಏನ ಮಾಡುತಿರ್ದನು
ಮಿಂಡಿ ಪೆಣ್ಣನು ಸಭೆಯಲ್ಲಿ ಸೀರೆ ಸುಲಿಯಲು
ಗಂಡರೈವರು ನೋಡಿ ಏನ ಮಾಡುತಿರ್ದರಯ್ಯ ||2||

ಮೃಗಚಕ್ರವರ್ತಿ ಬಹುವರನಾಗಿ ಪೋಗುತ್ತಿರೆ
ಮಿಗೆ ಸತಿಸುತರೇನ ಮಾಡುತಿರ್ದರು
ಮೃಗಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆ
ಮಿಗು ಬಂಧುಗಳದಾರಿಗಾರಿದ್ದರೇನು ||3||