ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ

Category: ಶ್ರೀಕೃಷ್ಣ

Author: ಕನಕದಾಸ

ಭವತಿ ಭಿಕ್ಷಾಂ ದೇಹಿ ಪರಬ್ರಹ್ಮ
ಭವದೂರ ಮಾಂಪಾಹಿ
ಭುವನ ಪಾವನ ಪರಮಾನಂದ ವರಗುಣಾ
ಸುವಿಮಲ ಶಾಂತಿ ಸದ್ಭಕ್ತಿ ಜೀವನ್ಮುಕ್ತಿ

ನಿತ್ಯ ನಿರ್ಮಲ ಜ್ಞಾನ ವಿಚಾರ ಪ್ರ-
ವೃತ್ತಿ ವಿವೇಕದಾನ
ಸತ್ಯ ಸದ್ವಿನಿಯ ಸಶ್ರವಣ ಮಾನಸಯೋಗ
ಚಿತ್ತ ನಿಧಿಧ್ಯಾಸ ಜಪತಪವ್ರತ ಪೂಜಾ ||1||

ದೋಷ ರಹಿತ ಭಾಷ ದುರಿತಗುಣ
ನಾಶ ಪರಮ ಸಂತೋಷ
ಕ್ಲೇಶ ವಿದೂರ ವಿಶೇಷ ವಿರಾಗ
ವಿಶ್ವಾಸ ವಿಹಿತ ಸದ್ಧರ್ಮ ವಿಚಾರ ||2||

ಪಾವನ ಪರಿಪೂರ್ಣ ಹೃದಯ ಸದಾ
ದೇವ ನಾಮಸ್ಮರಣ
ಭಾವ ಭರಿತ ಧ್ಯಾನ ಧಾರಣಯೋಗ ಸ-
ದ್ಭಾವ ಬ್ರಹ್ಮ ಆದಿಕೇಶವ ದಾಸತೆ ||3||