ಮಂಗಳಂ ಸರ್ವಜೀವ ರಕ್ಷಕಗೆ

Category: ಶ್ರೀಕೃಷ್ಣ

Author: ಕನಕದಾಸ

ಮಂಗಳಂ ಸರ್ವಜೀವ ರಕ್ಷಕಗೆ
ಮಂಗಳಂ ಅಂಬುಜದಳಾಕ್ಷಗೆ ||ಪ||

ಜಲಪ ಒಮ್ಮೆಗೆ ತಂದವಗೆ ಮಂಗಳಂ
ಕುಲಗಿರಿಯನು ಕಾಯ್ದವಗೆ ಮಂಗಳಂ
ನೆಲನ ಕದ್ದ ಚೋರನ ಗೆಲಿದಗೆ ಮಂಗಳಂ
ಸುಲಭ ನರಸಿಂಹನಿಗೆ ಶುಭಮಂಗಳಂ ||1||

ವಸುಧೆ ಈರಡಿ ಗೈದವಗೆ ಮಂಗಳಂ
ವಸುಧೇಶ ಕುಲವನಳಿದಗೆ ಮಂಗಳಂ
ದಶಕಂಧರನನು ಗೆಲಿದಗೆ ಮಂಗಳಂ
ಪಶುಗಳ ಕಾಯ್ದವಗೆ ಮಂಗಳ |2||

ಪುತ್ರಯ ವಧು ವ್ರತವಳಿದಗೆ ಮಂಗಳಂ
ತುರಗ ವಾಹನನಿಗೆ ಮಂಗಳಂ
ಗರಡು ವಾಹನ ವಾರಿಧಿ ಶಯನ
ವರ ಕಾಗಿನೆಲೆಯಾದಿಕೇಶವಗೆ ಮಂಗಳಂ ||3||