ಅಲ್ಲಿ ನೋಡಲು ರಾಮ

Category: ಶ್ರೀರಾಮ

Author: ಪುರಂದರದಾಸ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮಚಂದ್ರ ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು |
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ಶ್ರೀರಾಮಚಂದ್ರ ಜಗವೆಲ್ಲ ತಾನಾದ ||

ಇವನಿಗೆ ಅವ ರಾಮ ಅವನಿಗೆ ಇವ ರಾಮ
ಅವನಿಯೊಳೀ ಪರಿ ರೂಪವುಂಟೇ |
ಲವಮಾತ್ರದಿ ಅಸುರರ್ ದುರುಳತನದಿ ಕೂಡಿ
ಅವರವರ್ಹೊಡೆದಾಡಿ ಹತರಾಗಿ ಪೋದರು ||

ಹನುಮದಾದಿಗಳು ಇವನನಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ |
ಕ್ಷಣದಲಿ ಪುರಂದರವಿಟ್ಠಲರಾಯನು
ಕೊನೆಗೊಬ್ಬನಾಗಿಯೇ ರಣದಲಿ ನಿಂದ ||