ಯಾತಕೆ ದಯಮಾಡಲೊಲ್ಲೆ ರಂಗಯ್ಯ

Category: ಶ್ರೀಕೃಷ್ಣ

Author: ಕನಕದಾಸ

ಯಾತಕೆ ದಯಮಾಡಲೊಲ್ಲೆ ರಂಗಯ್ಯ- ಜಗ ||ಪ||
ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ ||ಅ||

ಚಿಕ್ಕಂದು ಮೊದಲೆ ನಾನು ರಂಗಯ್ಯ - ನೀನೆ
ದಿಕ್ಕೆಂದು ನಂಬಿದೆನೊ ರಂಗಯ್ಯ ||1||

ನೆಂಟರಿಷ್ಟರು ನೀನೆ ರಂಗಯ್ಯ - ನಿನ್ನ
ಬಂಟರಿಗೆ ಬಂಟನಯ್ಯ ರಂಗಯ್ಯ ||2||

ದಾಸರ ದಾಸನಯ್ಯ ರಂಗಯ್ಯ - ಕರ್ಮ
ಪಾಶಗಳ ಮೋಚನೆ ಮಾಡೊ ರಂಗಯ್ಯ ||3||