ವರವ ಕೊಡು ಎನಗೆ ವಾಗ್ದೇವಿ

Category: ಶ್ರೀಕೃಷ್ಣ

Author: ಕನಕದಾಸ

ವರವ ಕೊಡು ಎನಗೆ ವಾಗ್ದೇವಿ - ನಿಮ್ಮಚರಣ ಕಮಲಂಗಳ ದಯಮಾಡು ದೇವಿ

ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ - ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ ||1||

ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ||2||

ರವಿಕೋಟಿ ತೇಜಪ್ರಕಾಶೆ - ಮಹಾಕವಿ ಜನರ ಹೃತ್ಕಮಲ ವಾಸೆಅವಿರಳ ಪುರಿ ಕಾಗಿನೆಲೆಯಾದಿಕೇ-ಶವನ ಸುತನಿಗೆ ಸನ್ನುತ ರಾಣಿವಾಸೆ ||3||