ಶ್ರೀರಾಮನ ಪೂಜಿಸಲಿಲ್ಲ- ಮೈಮರೆತೆನಲ್ಲ
Category: ಶ್ರೀಕೃಷ್ಣ
Author: ಕನಕದಾಸ
ಶ್ರೀರಾಮನ ಪೂಜಿಸಲಿಲ್ಲ- ಮೈಮರೆತೆನಲ್ಲ ||ಪ||
ಬಾಲತ್ವದಲಿ ಬಲು ಲೀಲೆಯಿಂದಲಿ ನಾನು
ಕಾಲವ ಕಳೆದೆನಲ್ಲ- ಮೈಮರೆತೆನಲ್ಲ ||1||
ಸತಿಸುತರೆ ಎನಗೆ ಗತಿಯೆಂದು ತಿಳಿದು ನಾನು
ಮತಿಗೆಟ್ಟು ಭ್ರಾಂತನಾದೆನಲ್ಲ- ಮೈಮರೆತೆನಲ್ಲ
ಹೊನ್ನ ಗಳಿಸಿ ಪರರಿಗೆ ಅನ್ನವನಿಕ್ಕಲಿಲ್ಲ
ಚೆನ್ನಕೇಶವನ ನಂಬಲಿಲ್ಲ- ಮೈಮರೆತೆನಲ್ಲ ||2||