ತವ ಕೃಪೆ ಬೆಳಗಲಿ

Category: ಶ್ರೀಶಾರದಾದೇವಿ

Author: ಸ್ವಾಮಿ ಶಾಸ್ತ್ರಾನಂದ

ತವ ಕೃಪೆ ಬೆಳಗಲಿ ಭವಭ್ರಮೆ ಕಳೆಯಲಿ
ಶಿವೆ ಶ್ರೀಶಾರದೆ ತವಕದಿ ಮೊರೆಯುವೆ ||

ಇಂದು ಸುವಿಮಲೆ ವಂದಿತ ಪದತಲೆ |
ಕುಂದದ ಪ್ರೇಮದ ಮಂದಾಕಿನಿಯೆ ||

ತ್ಯಾಗವಿಭೂಷಿತೆ ತ್ಯಾಗಿಕುಲಾಂಬಿಕೆ |
ಯೋಗೀಂದ್ರಾರ್ಚಿತೆ ಯೋಗಪ್ರದಾತೆ ||

ನಿನ್ನಡಿದಾವರೆ ಎನ್ನಯ ಆಸರೆ |
ಮನ್ನಿಸು ದಾಸನ ಬಿನ್ನಹ ಮಾತೆ ||