ಸೇವಕತನದ ರುಚಿಯನೇನರಿದೆಯೊ
Category: ಶ್ರೀಕೃಷ್ಣ
Author: ಕನಕದಾಸ
ಸೇವಕತನದ ರುಚಿಯನೇನರಿದೆಯೊದೇವ ಹನುಮರಾಯ ವೈರಾಗ್ಯ ಬೇಡಿ
ಉದಧಿಯನು ದಾಟಿ ಸೀತೆಯ ಕಂಡು ಬಂದಾಗಮದುವೆಯನು ಮಾಡೆನ್ನಬಾರದಿತ್ತೆಪದದಿಂದ ಪಾಷಾಣ ಪೆಣ್ಣ ಮಾಡಿದಾತಗೆಇದೇನಸಾಧ್ಯವೊ ನೀ ಬಯಸಲೊಲ್ಲದೆ||1||
ಕ್ಷಣದಲ್ಲಿ ಸಂಜೀವನ ಪರ್ವತ ತಂದಾಗಹಣ ಹೊನ್ನುಗಳ ಬೇಡ ಬಾರದಿತ್ತೆವಿನಯದ ವಿಭೀಷಣಗೆ ರಾಜ್ಯವನಿತ್ತಂಥಧಣಿಗೆ ಏನಸಾಧ್ಯವೊ ಹನುಮ ನೀನೊಲ್ಲದೆ ||2||
ಸಾರ್ವಭೌಮನು ತಾನೆ ಮೆಚ್ಚಿ ಬಳಿಗೈದಾಗಉರ್ವಿಯನು ಬೇಡಿದಡೆ ಕೊಡದಿಹನೆಸರ್ವವನು ತೊರೆದು ಶ್ರೀ ನೆಲೆಯಾದಿ ಕೇಶವನನಿವ್ರ್ಯಾಜ ಭಕುತಿಯನು ಬೇಡಿಕೊಂಡೆಯೊ ||3||